ಯುವ ಜನತೆಯನ್ನ ತೀವ್ರವಾಗಿ ದಿಕ್ಕು ತಪ್ಪಿಸುತ್ತಿರುವುದು ಮೊಬೈಲ್, ಮಧ್ಯ ಮತ್ತು ಮುಖ್ಯವಾಗಿ ಮಾದಕ ವ್ಯಸನ ಇದರಲ್ಲಿ ಯಾವ ಅನುಮಾನವೂ ಇಲ್ಲ ಯುವಕರಿಗೆ ನಾವೇನು ಕಮ್ಮಿ ಇಲ್ಲ ಎನ್ನುವ ರೇಂಜಿನಲ್ಲಿ ಹುಡುಗಿಯರೂ ಅದೆಲ್ಲದರಲ್ಲೂ ಲೀಲಾಜಾಲಾವಾಗಿದ್ದಾರೆ, ಅದರಲ್ಲೂ ರಾಜ ರೋಷವಾಗಿ ಹೊಗೆ ಬತ್ತಿ ಎಳೆಯುವುದು ಇಂದೇನು ಅಚ್ಚರಿ ಅಂತನ್ನಿಸುವುದಿಲ್ಲ. ಕಾಲೇಜು ಹುಡುಗರು ಬಹುತೇಕವಾಗಿ ಬಳಸುವುದು ಗಾಂಜಾವನ್ನ? ಬೇರೆ ದುಬಾರಿ ಬೆಲೆಯ ಡ್ರಗ್ಸ್ ಅವರ ಕೈಗೆ ನಿಲುಕದ ಎತ್ತರದ ಬೆಲೆಯುಳ್ಳದ್ದಾದ್ದರಿಂದ ಗಾಂಜಾ ಅಮಲಿಗೆ ಬೇಗನೆ ಹುಡಗರು ಬಲಿಯಾಗುತ್ತಿದ್ದಾರೆ, ಅವರಿಗೆ ಗೊತ್ತಿರುವ ಸಣ್ಣ ಸಣ್ಣ ಬೀಡಾ ಅಂಗಡಿಯಲ್ಲಿ ಹೊವಿನ ಅಂಗಡಿಯಲ್ಲಿ ಗಾಂಜಾ ತುಂಬಿಸಿದ್ದ ಸಿಗರೇಟುಗಳು ದೊರಕುತ್ತವೆ? ಮೊದಲೆಲ್ಲ ಅದು ನೆರೆಯ ರಾಜ್ಯ ಕೇರಳದಿಂದ ರೈಲಿನಲ್ಲಿ ಬಂದು ಮಂಗಳೂರು ತಲುಪುತ್ತಿತ್ತು ಎನ್ನಲಾಗುತ್ತಿತ್ತು. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ ಮಂಗಳೂರಿನಲ್ಲಿ ಗಾಂಜಾ ಮಾಫಿಯಾವೇ ಕೆಲಸ ಮಾಡುತ್ತಿತ್ತು ಅದಕ್ಕಾಗಿಯೇ ಗಾಂಜಾ ಪೆಡ್ಲರ್‌ಗಳ ಕೊಲೆಯ ಮೇಲೆ ಕೊಲೆ ನಡೆಯುತ್ತಿತ್ತು. ಗಾಂಜಾವನ್ನು ವ್ಯವಸ್ಥಿತವಾಗಿ ಅಲ್ಲಿಂದ ಅಲ್ಲಿಗೆ ತಲುಪಿಸುವುದು ಮುಸ್ಲಿಮ್ ಮಾಫಿಯಾದವರ ಕೆಲಸ ಗಾಂಜಾ ಕಿಂಗ್ ಪಿನ್‌ಗಳೇ ಮುಸ್ಲೀಮ್ ಭೂಗತ ಜಗತ್ತಿನ ಜೊತೆಗಿನ ಲಿಂಕ್ ಇರಿಸಿಕೊಂಡವರೇ ಆಗಿದ್ದಾರೆ. ಕೆಲವು ಕಾಲೇಜು ಹುಡುಗರನ್ನು ಈ ದಂಧೆಯಲ್ಲಿ ಮಟ್ಟಸವಾಗಿ ಬಳಸಿಕೊಳ್ಳಲಾಗುತ್ತದೆ.
ಪೊಲೀಸಿಂಗ್ ಜೋರಾಗಿದೆ
ಪಶ್ಚಿಮ ವಲಯ ಐ.ಜಿ.ಪಿ ಅರುÄಣ್ ಚಕ್ರವರ್ತಿ ಈ ಭಾಗಕ್ಕೆ ಐ.ಜಿ.ಪಿಯಾಗಿ ನಿಯುಕ್ತಿಗೊಂಡ ದಿನವೇ ಇಲ್ಲಿನ ಅಧಿಕಾರಿಗಳಿಗೆ ತಾಕೀತು ಮಾಡಿದ್ದು ಇಲ್ಲಿನ ರೌಡಿಪಾಳಯದ ಹುಟ್ಟಡಗಿಸಿ, ಡ್ರಗ್ಸ್ ಮಾಫಿಯಾದವರ ಮಗ್ಗಲು ಮುರಿಯಿರಿ ಎಂದು. ಹಾಗಾಗಿ ಎಲ್ಲಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳೇ ಡ್ರಗ್ಸ್ ಮಾಫಿಯಾದ ವಿರುದ್ಧ ಸಾರ್ವಜನಿಕವಾಗಿಯೇ ಮ್ಯಾರಾಥಾನ್‌ಗಳನ್ನು ನಡೆಸಿದರು. ಜನ ಜಾಗೃತಿ ಸಭೆಯನ್ನ ಆಯೋಜಿಸಿದರು, ಗಾಂಜಾದ ಬಗ್ಗೆ ಮಾಹಿತಿ ಕೊಟ್ಟವರಿಗೆ ಗುಪ್ತವಾಗಿ ಬಹುಮಾನಗಳನ್ನ ನೀಡಿದರು ಅಲ್ಲಲ್ಲಿ ಸಾವಿರಾರು ಖಬರಿಗನ್ನ ನೇಮಕಮಾಡಿಕೊಂಡರು ಗಾಂಜಾ ದಂಧೆಯನ್ನ ಮಟ್ಟಹಾಕಲು ಪೊಲೀಸರು ಹಳೆ ಪಾತಕಿಗಳನ್ನ ಮಾತಾಡಿಸಿ ಅವರಿಂದಲೂ ಮಾಹಿತಿ ಪಡೆದು ಕ್ರಿಯಾಶೀಲರಾದರು ಅರುಣ ಚಕ್ರವರ್ತಿಯವರ ಆಸಕ್ತಿಯ ಕಾರಣಕ್ಕೆ ಒಂದು ಹಂತಕ್ಕೆ ಗಾಂಜಾ ಮಾಫಿಯಾ ಹದ್ದು ಬಸ್ತಿಗೆ ಬಂತು, ಈ ವಿಷಯದಲ್ಲಿ ಪೊಲೀಸರನ್ನು ದೂರುವಂತಿಲ್ಲ ಕರಾವಳಿಯಲ್ಲಿ ಒಮ್ಮಿಂದೊಮ್ಮೆಗೆ ಗಾಂಜಾ ಪೆಡ್ಲಿಂಗ್ ನೆಲೆಕಳೆದುಕೊಳ್ಳ ತೊಡಗಿತು. ಬೀಡಿ ಎಲೆಯ ಲೋಡಿನಲ್ಲಿ ಹೂವಿನ ಮೂಟೆಯ ಅಡಿಯಲ್ಲಿ ವೀಳ್ಯದ ಎಲೆಯ ಜೊತೆಗೆ, ಹುಲ್ಲಿನ ಲಾರಿಗಳಲೆಲ್ಲಾ ಗಾಂಜಾ ಒಂದೆಡೆಯಿAದ ಇನ್ನೊಂದೆಡೆಗೆ ರವಾನೆಯಾಗುತ್ತಿದ್ದವು, ಬೆಳ್ಳಂಬೆಳಿಗ್ಗೆ ತಲುಪುವ ಪೇಪರ್ ಗಾಡಿಯ ಡ್ರೆöÊವರ್‌ಗಳಿಗೆ ಕಾಸು ಕೊಟ್ಟು ಪಾರ್ಸೆಲ್ ಕಳುಹಿಸುತ್ತಿದ್ದರು ಪೇಪರ್ ಗಾಡಿಗಳನ್ನು ಯಾರು ಚೆಕ್ ಮಾಡುತ್ತಿರಲಿಲ್ಲ ಇನ್ನು ಕೆಲವು ಅಂಬುಲೆನ್ಸ್ ವಾಹನಗಳನ್ನೇ ಬುಕ್ ಮಾಡಿ ಗಾಂಜಾ ರವಾನೆಗೆ ಪ್ರಮುಖ ಸಂಚಾರಿಯನ್ನಾಗಿ ಬಳಸಿಕೊಂಡಿದ್ದರು. ಒಂದಲ್ಲ ಒಂದು ಹಂತದಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಈ ದಂಧೆ ನಿರಂತರವಾಗಿ ನಡೆಯುತ್ತಲೇ ಇತ್ತು.!
ಹಾಗಂತ ಸುದ್ಧಿಯೊಂದು ಹುಟ್ಟಿತ್ತು ಸುಮ್ಮನೆಯಲ್ಲ? ಗಾಂಜಾ ಪ್ರಕರಣದಲ್ಲಿ ಮಟ್ಟೆ ಅಪ್ಪಚ್ಚು ಎಂಬಾತನನ್ನ ಬಂಧಿಸಿ ತರುವ ಪೊಲೀಸರು ಅವನನ್ನ ಧಳಿಸಿ ಧಳಿಸಿಯೇ ಕೊಂದರು ಎನ್ನುತ್ತದೆ. ಮುದೂರು ಎನ್ನುವ ಹಳ್ಳಿ! ಮಟ್ಟೆ ಅಪ್ಪಚ್ಚು ಲಾಕಪ್‌ಡೆತ್ತಾ? ಹಾಗಂತ ಅದೆಲ್ಲಿಯೂ ಪೊಲೀಸ್ ಫೈಲಿನಲ್ಲಿ ದಾಖಲಾಗಿಲ್ಲ? ಅನಾರೋಗ್ಯದಿಂದ ಮಟ್ಟೆ ಅಪ್ಪಚ್ಚು ಸತ್ತ ಎನ್ನುತ್ತದೆ ವರದಿ! ಹಾಗಿದ್ದರೆ ದಾಖಲೆಗಳೆಲ್ಲವೂ ಸತ್ಯವೇ ? ಅದಲ್ಲದಿದ್ದರೆ ಸತ್ಯ ಎಂದರೆ ಯಾವುದು? ನಡೆದಿದ್ದೆಲ್ಲವೂ ವಿಡಿಯೋ ಚಿತ್ರಿಕರಣ ಮಾಡಲು ಸಾಧ್ಯವೇ? ಹೀಗೆಲ್ಲಾ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಮೂಡುತ್ತವೆ, ಉಡುಪಿ ಜಿಲ್ಲೆಯ ಮುದೂರು ಕೊಲ್ಲೂರಿನ ಸನಿಹದಲ್ಲಿದೆ. ಸುತ್ತಲೂ ಹಬ್ಬಿ ನಿಂತಿರುವ ಥಟ್ಟವಾದ ಕಗ್ಗಾಡು ಸೂರ್ಯನ ಬೆಳಕೂ ಭೂಮಿಗೆ ತಾಕದಂತಹ ಜಾಗಗಳಿವು. ಅಲ್ಲಿಗೆ ಅಮರಿಕೊಂಡರು ಕೇರಳಿಗರು ಲ್ಯಾಂಡ್ ಡೀಲಿಂಗ್ ಜೋರಾಗಿ ನಡೆಯುತ್ತಿದ್ದಕಾಲದಲ್ಲಿ ಕೇರಳಿಗರು ಕೊಲ್ಲೂರು ಕಡೆ ಮುಖ ಮಾಡಿದರು. ಮೊದಲು ಇಲ್ಲಿ.
ಬಂದು ರಬ್ಬರ್ ಬೆಳೆಯಲು ಜಾಗಗಳನ್ನು ಇಪ್ಪತ್ತು ಮೊವತ್ತು ವರ್ಷಗಳಿಗೆ ಲೀಸಿಗೆ ಪಡೆದರು. ರಬ್ಬರೂ ಬೆಳೆದರೂ, ಕಲ್ಲು ಕೋರೆ ಮಾಡಿದರು, ಕೈ ತುಂಬಾ ಕಾಸಾಯಿತು ಕೊನೆಗೆ ಆ ಜಾಗಗಳನ್ನೇ ಮೂರು ಕಾಸಿಗೆ ಕೊಂಡು ತಮ್ಮ ಹೆಸರಿಗೆ ಬರಸಿಕೊಂಡು ಬಿಟ್ಟರು ಇವತ್ತು ಕೊಲ್ಲೂರು ಸನಿಹದ ಮುದೂರಿನಲ್ಲಿ ಕನ್ನಡ ಮಾತಾಡುವವರಿಗಿಂತಲೂ ಮಲೆಯಾಳಮ್ ಮಾತಾಡುವವರೇ ಹೆಚ್ಚಿದ್ದಾರೆ. ಆವತ್ತು ಜಾಗ ಕೊಟ್ಟವರೆಲ್ಲಾ ಇಂದು ಅದೇ ಮಲೆಯಾಳಿಗಳ ತೋಟದಲ್ಲಿ ಕೂಲಿಗಳಾಗಿ ದುಡಿಯುತ್ತಿದ್ದಾರೆ, ನೂರು, ಇನ್ನೂರು, ಮುನ್ನೂರು ಅಷ್ಟೆ ಯಾಕೆ ಸಾವಿರಾರು ಎಕರೆ ತೋಟಗಳಿವೆ ಅಲ್ಲಿ? ಅದರಸುತ್ತಲೂ ಕರೆಂಟು ಹಾಯಿಸಲಾದ ಬೇಲಿಗಳಿವೆ. ಒಳಗೆ ಯಾರಿಗೂ ಪ್ರವೇಶವಿಲ್ಲ? ಪರವಾನಿಗೆ ಇಲ್ಲದೆ ಹೋದವಾ ವಾಪಾಸ್ ಬರುತ್ತಾನಾ? ಗೊತ್ತೆ ಆಗುವುದಿಲ್ಲ? ಹಾಗಿನ ತೋಟದ ನಡುವಿನಲ್ಲಿ ನೂರಾರು ಎಕರೆ ಜಾಗದಲ್ಲಿ ಗಾಂಜಾ ಬೆಳೆಯಲಾಗುತ್ತದೆ ಎನ್ನುತ್ತದೆ ಸುದ್ಧಿ? ಇದನ್ನ ನೆಚ್ಚಿಕೊಂಡು ಹುಂಬ ಧೈರ್ಯದೊಂದಿಗೆ ಆ ತೋಟದ ಒಳಗೆ ನುಗ್ಗಲು ಯತ್ನಿಸಿದರೆ ಆತ ಮತ್ತೆ ಮರಳಿ ಬಾರದಿದ್ದರೆ? ಸುದ್ಧಿ ಕೊಡಲಿಕ್ಕೂ ಯಾರು ಇರಲಾರರು ಇದರ ಒಳಗೆ ನುಗ್ಗಲಿಕ್ಕೆ ಪೊಲೀಸರು ಸಿದ್ದರಿದ್ದಾರಾ?
ಕೊಡಚಾದ್ರಿ ತಪ್ಪಲಿನಲ್ಲಿ ಗಾಂಜಾ
ನಿಮಗೆ ಕೊಡಚಾದ್ರಿಯ ಬಗ್ಗೆ ಗೊತ್ತಿಲ್ಲ! ಕೇರಳದಿಂದ ಶಂಕರಾಚಾರ್ಯರು ಅದೇ ಕೊಡಚಾದ್ರಿಯ ಮಾರ್ಗವಾಗಿಯೇ ನಡೆದು ಬಂದರು ಎನ್ನುತ್ತದೆ ಒಂದು ಪುರಾಣದ ಕಥೆ! ಕೊಲ್ಲೂರಿನ ಮೂಲ ಮೂಂಕಾಬಿಕೆಯ ಸನ್ನಿಧಾನ.